ಎಚ್‌ ಡಿ ಎಫ್‌ ಸಿ ಬ್ಯಾಂಕಿನ ವೈವಿಧ್ಯಮಯ ಲೋನ್ ಪೋರ್ಟ್‌ಫೋಲಿಯೋ ವಸತಿಯೇತರ ವಿಭಾಗದ ಅಗತ್ಯಗಳನ್ನು ಪೂರೈಸುತ್ತದೆ. ವಾಣಿಜ್ಯ ಆಸ್ತಿಯ ಖರೀದಿಗಾಗಲಿ ಅಥವಾ ವೈಯಕ್ತಿಕ ಹಾಗೂ ವ್ಯವಹಾರ ವೆಚ್ಚಗಳಿಗೆ ಬೇಕಾದ ಧನಸಹಾಯವಾಗಲಿ, ನಾವು ಹಲವಾರು ರೀತಿಯ ಲೋನ್‌ಗಳನ್ನು ನೀಡುತ್ತೇವೆ.

ಸ್ವಯಂ ಒಡೆತನದ ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಅಡಮಾನ ಇಡುವುದರ ಮೂಲಕ ನೀವು ಆಸ್ತಿಯ ಮೇಲೆ ಲೋನ್ ಪಡೆಯಬಹುದು. ದೀರ್ಘ ಮರುಪಾವತಿ ಅವಧಿ ಮತ್ತು ಕಡಿಮೆ ಬಡ್ಡಿ ದರಗಳು ಇತರ ವಾಣಿಜ್ಯ/ಕನ್ಸೂಮರ್ ಲೋನ್‌ಗಳಿಗೆ ಹೋಲಿಸಿದರೆ ಇದನ್ನು ಆದ್ಯತೆಯ ಆಯ್ಕೆಯಾಗಿ ಮಾಡುತ್ತದೆ. ವೈಯಕ್ತಿಕ ಅಗತ್ಯಗಳಿಂದ ಹಿಡಿದು ವ್ಯವಹಾರದ ಅವಶ್ಯಕತೆಗಳವರೆಗೆ ಅನೇಕ ಉದ್ದೇಶಗಳಿಗಾಗಿ ನೀವು ಆಸ್ತಿಯ ಮೇಲೆ ಲೋನ್ ಬಳಸಬಹುದು.

... ಹೆಚ್ಚು ಓದಿ

ಆಫೀಸ್, ಕ್ಲಿನಿಕ್ ಇತ್ಯಾದಿ ಅಗತ್ಯಗಳಿಗಾಗಿ ನೀವು ನಿಮಗಿಷ್ಟವಾದ ಕೆಲಸದ ಸ್ಥಳವನ್ನು ಕೊಂಡುಕೊಳ್ಳಬಹುದು. ಅಥವಾ ನಮ್ಮ ವಸತಿಯೇತರ ಆಸ್ತಿ ಲೋನ್‌ನೊಂದಿಗೆ ನಿಮ್ಮ ಈಗಿನ ಆಫೀಸನ್ನು ನವೀಕರಿಸಬಹುದು ಅಥವಾ ವಿಸ್ತರಿಸಬಹುದು.. ನಮ್ಮ ವಸತಿಯೇತರ ಪ್ಲಾಟ್ ಲೋನ್‌ಗಳೊಂದಿಗೆ ನೀವು ವಾಣಿಜ್ಯ ಪ್ಲಾಟನ್ನು ಸಹ ಖರೀದಿಸಬಹುದು ಮತ್ತು ಅದರಲ್ಲಿ ನಿಮ್ಮ ಕನಸಿನ ಆಫೀಸನ್ನು ಕಟ್ಟಿಸಬಹುದು. ನಮ್ಮ ತಜ್ಞ ಕಾನೂನು ಮತ್ತು ತಾಂತ್ರಿಕ ಸಮಾಲೋಚನೆಯು ಖರೀದಿ ಮಾಡುವ ಮುನ್ನ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಆನ್ಲೈನಿನಲ್ಲಿ ಅಪ್ಲೈ ಮಾಡುವ ಅನುಕೂಲತೆ, ಸುಲಭ ಡಾಕ್ಯುಮೆಂಟೇಶನ್, ಸರಳ ಲೋನ್ ಅನುಮೋದನೆ ಪ್ರಕ್ರಿಯೆ, ಆಕರ್ಷಕ ಬಡ್ಡಿ ದರಗಳು ಮತ್ತು ಕಸ್ಟಮೈಸ್ ಮಾಡಿದ ಮರುಪಾವತಿ ಆಯ್ಕೆಗಳಂತಹ ಫೀಚರ್‌ಗಳೊಂದಿಗೆ, ಎಚ್ ಡಿ ಎಫ್ ಸಿ ಬ್ಯಾಂಕಿನ ನಾನ್ ಹೌಸಿಂಗ್ ಲೋನ್‌ಗಳು ಜಾಣ ಆಯ್ಕೆಯಾಗಿವೆ.

ಆದ್ದರಿಂದ, ನಿಮ್ಮ ಕನಸುಗಳನ್ನು ಬೆನ್ನಟ್ಟಿ, ನಾವು ನಿಮಗೆ ಹಣಕಾಸಿನ ಭರವಸೆ ನೀಡುತ್ತೇವೆ. ಕಡಿಮೆ ಓದಿ