ಬಡ್ಡಿ ದರಗಳು

ಸ್ಟ್ಯಾಂಡರ್ಡ್ ದರಗಳು 

ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಸ್ವಯಂ ಸ್ವಾಧೀನಪಡಿಸಿಕೊಂಡ ವಸತಿ ಆಸ್ತಿ 8.95 - 9.95
ಸ್ವಯಂ ಸ್ವಾಧೀನಪಡಿಸಿಕೊಳ್ಳದ ವಸತಿ ಆಸ್ತಿ 9.25 - 10.25


ರಿಟೇಲ್ ಪ್ರೈಮ್ ಲೆಂಡಿಂಗ್ ದರ (ವಸತಿ ಅಲ್ಲದ): 12.20%

ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಕಮರ್ಷಿಯಲ್ ಪ್ರಾಪರ್ಟಿ 9.25 - 10.25

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಡಾಕ್ಯುಮೆಂಟ್‌ಗಳು

ಲೋನ್ ಅನುಮೋದನೆಗಾಗಿ ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ನೀವು ಎಲ್ಲಾ ಅರ್ಜಿದಾರರು / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ.

ಶುಲ್ಕಗಳು ಮತ್ತು ಚಾರ್ಜ್‌ಗಳು

ಆಸ್ತಿ ಮೇಲಿನ ಲೋನ್ ಪ್ರಯೋಜನಗಳು

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಮ್ಮನ್ನು ಸಂಪರ್ಕಿಸಿ!

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

ಸಂಪೂರ್ಣ ನಿರ್ಮಿತ, ಫ್ರೀಹೋಲ್ಡ್ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲೆ ಲೋನ್:ವ್ಯಾವಹಾರಿಕ ಅಗತ್ಯಗಳಿಗಾಗಿ; ಮದುವೆ, ವೈದ್ಯಕೀಯ ವೆಚ್ಚಗಳು ಮತ್ತು ಇತರ ವೈಯಕ್ತಿಕ ಅಗತ್ಯಗಳು; ಬೇರೆ ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಉಳಿದಿರುವ ಲೋನನ್ನು ವರ್ಗಾಯಿಸಲಾಗುತ್ತಿದೆ.

ಸುಲಭ ಮತ್ತು ತೊಂದರೆ ರಹಿತ ಡಾಕ್ಯುಮೆಂಟೇಶನ್.

ಮಾಸಿಕ ಕಂತುಗಳ ಮೂಲಕ ಸರಳ ಮರುಪಾವತಿಗಳು.

ಭಾರತದಲ್ಲಿ ಎಲ್ಲಿಯಾದರೂ ಲೋನನ್ನು ಮತ್ತು ಲೋನ್ ಸೇವೆಯನ್ನು ಪಡೆಯಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್.

ದೀರ್ಘಾವಧಿ, ಚಿಕ್ಕ EMI ಗಳು.

ಆಕರ್ಷಕ ಬಡ್ಡಿ ದರಗಳು.

ಆಸ್ತಿ ಅಡಮಾನ ಲೋನ್ ಅರ್ಹತೆ

ಪ್ರಮುಖ ಅಂಶ ಮಾನದಂಡ
ವಯಸ್ಸು 21-65 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ ಭಾರತೀಯ ನಿವಾಸಿ
ಅವಧಿ 15 ವರ್ಷಗಳವರೆಗೆ

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಸಹ-ಅರ್ಜಿದಾರರ ಪ್ರಯೋಜನವನ್ನು ಹೇಗೆ ಸೇರಿಸಲಾಗುತ್ತದೆ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ.
  • ಸಹ-ಅರ್ಜಿದಾರರಾಗಿ ಮಹಿಳಾ ಸಹ-ಮಾಲೀಕರನ್ನು ಸೇರಿಸುವ ಮೇಲೆ ಕಡಿಮೆ ಬಡ್ಡಿ ದರ.

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.

 

ಗರಿಷ್ಠ ಫಂಡಿಂಗ್

ಅಸ್ತಿತ್ವದಲ್ಲಿರುವ ಎಚ್ ಡಿ ಎಫ್ ಸಿ ಗ್ರಾಹಕರು ಹೊಸ ಗ್ರಾಹಕರು

ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌ಗಳ ಮೇಲಿನ ಅಸಲು ಬಾಕಿ ಮತ್ತು ಆಸ್ತಿ ಮೇಲಿನ ಲೋನನ್ನು ಪಡೆದುಕೊಳ್ಳುವುದು ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ ಅಡಮಾನ ಆಸ್ತಿಯ 60% ಮಾರುಕಟ್ಟೆ ಮೌಲ್ಯವನ್ನು ಮೀರಬಾರದು.

ಪಡೆದುಕೊಳ್ಳುತ್ತಿರುವ ಆಸ್ತಿ ಮೇಲಿನ ಲೋನ್ ಸಾಮಾನ್ಯವಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ ಆಸ್ತಿಯ ಮಾರುಕಟ್ಟೆ ಮೌಲ್ಯದ 50% ಮೀರಬಾರದು.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಅಘಾರ ರವಿಕುಮಾರ್ ಎಂ

ಎಚ್ ಡಿ ಎಫ್ ಸಿ ಸಿಬ್ಬಂದಿ ಬೆಂಬಲದೊಂದಿಗೆ ವಿತರಣೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದು ತುಂಬಾ ಸುಲಭವಾಗಿತ್ತು

ಮುರಳಿ ಶೀಬಾ

ಬ್ಯಾಂಕ್‌ಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿಯೇ ತೊಂದರೆ-ರಹಿತ ಸೇವೆ ನೀಡುತ್ತಿರುವುದು, ಬಿಡುವಿಲ್ಲದ ಶೆಡ್ಯೂಲ್ ಹೊಂದಿರುವ ನಮ್ಮಂಥ ಜನರಿಗೆ ನಿಜವಾಗಿಯೂ ಬಹಳ ಅನುಕೂಲ ಮಾಡಿದೆ.

ಫ್ರೆಡ್ಡಿ ವಿನ್ಸೆಂಟ್ ಎಸ್. ವಿ

ಈ ಸವಾಲಿನ ಸಂದರ್ಭದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಸುಗಮ ರೀತಿಯಲ್ಲಿ ನಡೆಸಲಾಯಿತು. ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸಿದರು.

ಆಗಾಗ್ಗೆ ಕೇಳುವ ಪ್ರಶ್ನೆಗಳು

ಪ್ರಾಪರ್ಟಿ ಮೇಲಿನ ಲೋನ್ ಎಂದರೇನು?

ಆಸ್ತಿ ಮೇಲಿನ ಲೋನ್ ಎನ್ನುವುದು ಸುರಕ್ಷಿತ ಲೋನ್ ಆಗಿದ್ದು, ಹಣಕಾಸು ಸಂಸ್ಥೆಗಳು ಸಂಪೂರ್ಣವಾಗಿ ನಿರ್ಮಿಸಲಾದ, ಹಾಗೆಯೇ ಬಿಟ್ಟಿರುವ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲೆ ಇದನ್ನು ಒದಗಿಸುತ್ತವೆ. ಮದುವೆ, ವೈದ್ಯಕೀಯ ವೆಚ್ಚಗಳು ಮತ್ತು ಮಗುವಿನ ಶಿಕ್ಷಣ ಇತ್ಯಾದಿಗಳಂತಹ ವೈಯಕ್ತಿಕ ಮತ್ತು ಬಿಸಿನೆಸ್ ಅಗತ್ಯಗಳಿಗಾಗಿ (ಲಾಭದ ಉದ್ದೇಶಗಳನ್ನು ಹೊರತುಪಡಿಸಿ) ಅಡಮಾನ ಲೋನ್ ಅನ್ನು ಪಡೆಯಬಹುದು. ಇತರ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುವ ಆಸ್ತಿ ಮೇಲಿನ ಲೋನ್ ಅನ್ನು ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ವರ್ಗಾವಣೆ ಮಾಡಬಹುದು.

LAP ಯಾಗಿ ಆಸ್ತಿಯ ಮೇಲೆ ನಾನು ಎಷ್ಟು ಗರಿಷ್ಠ ಹಣಕಾಸನ್ನು ಪಡೆದುಕೊಳ್ಳಬಹುದು?

ಅಸ್ತಿತ್ವದಲ್ಲಿರುವ ಗ್ರಾಹಕರಿಗೆ, ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌ಗಳ ಮೇಲಿನ ಅಸಲು ಬಾಕಿ ಮತ್ತು ಪಡೆದುಕೊಳ್ಳುವ ಆಸ್ತಿ ಮೇಲಿನ ಲೋನ್ ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ ಅಡಮಾನ ಆಸ್ತಿಯ ಮಾರುಕಟ್ಟೆ ಮೌಲ್ಯದ 60% ಮೀರಬಾರದು. ಹೊಸ ಗ್ರಾಹಕರಿಗೆ, ಪಡೆದುಕೊಳ್ಳುತ್ತಿರುವ ಆಸ್ತಿ ಮೇಲಿನ ಲೋನ್, ಸಾಮಾನ್ಯವಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ ಆಸ್ತಿಯ ಮಾರುಕಟ್ಟೆ ಮೌಲ್ಯದ 50% ಮೀರಬಾರದು.

ಆಸ್ತಿ ಮೇಲಿನ ಲೋನನ್ನು ಯಾರು ಪಡೆದುಕೊಳ್ಳಬಹುದು (LAP) ?

ಆಸ್ತಿ ಮೇಲಿನ ಲೋನ್ (LAP) ಸಂಬಳದ ಮತ್ತು ಸ್ವಯಂ ಉದ್ಯೋಗಿಗಳು ಇಬ್ಬರಿಗೂ ಅವರ ಖಾಸಗಿ ಮತ್ತು ವೃತ್ತೀಯ ಅಗತ್ಯಗಳಾದ (ಲಾಭದ ಉದ್ದೇಶಗಳಿಗೆ ಹೊರತಾಗಿ) ಮದುವೆ, ಮಗುವಿನ ಶಿಕ್ಷಣ, ಬಿಸಿನೆಸ್ ವಿಸ್ತರಣೆ, ಸಾಲದ ಕ್ರೋಢೀಕರಣ ಇತ್ಯಾದಿಗಳಿಗಾಗಿ ದೊರಕುವುದು.

ಆಸ್ತಿ ಮೇಲಿನ ಲೋನಿಗೆ (LAP) ನಾನು ಪಡೆದುಕೊಳ್ಳಬಹುದಾದ ಗರಿಷ್ಠ ಟರ್ಮ್ ಎಷ್ಟು?

ಗರಿಷ್ಠ ಟರ್ಮ್ 15 ವರ್ಷಗಳಿಗೆ ಅಥವಾ ನಿಮ್ಮ ನಿವೃತ್ತಿಯ ಅವಧಿಯವರೆಗೆ, ಯಾವುದು ಕಡಿಮೆಯೋ ಅದರ ಪ್ರಕಾರ, ನೀವು ಆಸ್ತಿ ಮೇಲಿನ ಲೋನನ್ನು ಪಡೆದುಕೊಳ್ಳಬಹುದು.

ಆಸ್ತಿ ಮೇಲಿನ ಲೋನನ್ನು (LAP) ಪಡೆದುಕೊಳ್ಳಲು ನಾನು ಸಲ್ಲಿಸಬೇಕಾದ ಭದ್ರತೆ ಏನು?

ಲೋನ್ ಭದ್ರತೆ ಸಾಮಾನ್ಯವಾಗಿ ನಮ್ಮಿಂದ ಮತ್ತು / ಅಥವಾ ಯಾವುದೇ ಇತರ ಭಿನ್ನ ಶಾಖೆ / ಮಧ್ಯಂತರ ಭದ್ರತೆಯಿಂದ ಹಣ ಪಡೆಯುವ ಆಸ್ತಿಯ ಮೇಲೆ ಭದ್ರತಾ ಬಡ್ಡಿಯನ್ನು ಹೊಂದಿರುತ್ತದೆ.

ಕಮರ್ಷಿಯಲ್ ಪ್ರಾಪರ್ಟಿಗೆ ನಾನು ಆಸ್ತಿ ಮೇಲಿನ ಲೋನ್ (LAP) ಅನ್ನು ಪಡೆದುಕೊಳ್ಳಬಹುದೇ?

ಹೌದು, ಆಸ್ತಿ ಮೇಲಿನ ಲೋನನ್ನು (LAP) ಸಂಪೂರ್ಣವಾಗಿ ನಿರ್ಮಿಸಿದ ಮತ್ತು ಹಾಗೆಯೇ ಬಿಟ್ಟಿರುವ ಕಮರ್ಷಿಯಲ್ ಪ್ರಾಪರ್ಟಿ ಮೇಲೆ ಪಡೆದುಕೊಳ್ಳಬಹುದು .

ಆಸ್ತಿ ಮೇಲಿನ ಲೋನಿಗೆ ಬೇಕಾಗುವ ಡಾಕ್ಯುಮೆಂಟ್‌‌ಗಳು ಏನು?

ಅಗತ್ಯವಿರುವ ಡಾಕ್ಯುಮೆಂಟ್‌‌ಗಳು ಮತ್ತು ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ನೀವು ಚೆಕ್‌‌ಲಿಸ್ಟನ್ನು https://www.hdfc.com/checklist#documents-charges ನಲ್ಲಿ ನೋಡಬಹುದು

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!